Thursday, September 3, 2015

Yellow Browed Bul-Bul- Ioleindica R- Myna +









Yellow Browed Bul-Bul- Ioleindica R- Myna +
ಹಳದಿ ಹುಬ್ಬಿನ ಪಿಕಳಾರ- ಭಾರತದಲ್ಲಿ ಸುಮಾರು ೨೦ ಪ್ರಕಾರದ ಪಿಕಳಾರ ಹಕ್ಕಿಗಳಿವೆ. ಇದರಲ್ಲಿ ಕನಾಟಕದಲ್ಲಿ ೬ಕ್ಕಿಂತ ಹೆಚ್ಚು ಪ್ರಬೇಧಗಳಿವೆ. ಪಿಕಳಾರವು ತುಂಬಾ ಸಂಕೋಚ ಹಾಗೂ ಗಾಬರಿ ಅಳುಕು ಸ್ವಭಾಹ ಹೊಂದಿವೆ. ಕೇಸರಿ ಕುತ್ತಿಗೆ ಪಿಕಳಾರ, ಕೆಂಪು ಕೆನ್ನೆ ಪಿಕಳಾರ, ಕಪ್ಪು ತಲೆ ಪಿಕಳಾರ, ಬಿಳಿಹುಬ್ಬಿನ ಪಿಕಳಾರ, ಕೆಂಪು ಕುಂಡೆ ಪಿಕಳಾರ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ನನಗೆ ಸಿಕ್ಕಿವೆ. ಅಣಸಿ ಪಕ್ಷಿಧಾಮ, ಶಿರಸಿ, ಬಡಾಳ, ಯಲ್ಲಾಪುರದ ಪ್ರದೇಶದಲ್ಲಿವೆ. ಚಿಕ್ಕ ಗುಂಪಿನಲ್ಲಿ, ಕೆಲವೊಮ್ಮೆ ೭-೮ರ ಸಮೂಹದಲ್ಲೂ ಸಿಗುತ್ತವೆ. ಪಿಕಳಾರ ಗುಂಪಿನ ೬ ವಿಧಹಕ್ಕಿಗಳು ಒಂದೇ ಕಡೆ ಸಿಕ್ಕ ಉದಾಹರಣೆಯೂ ಇದೆ. ಕೆಲವೊಮ್ಮೆ ಎರಡು ಮೂರು ಪ್ರಬೇಧಗಳು, ಬಿಳಿ ಕಣ್ಣಿನ ಚಿಟಗುಬ್ಬಿ, ಕಪ್ಪು ತಲೆ ಮುನಿಯಾ, ಕಾನು ಗುಬ್ಬಿ, ಬಿಳಿ ರೆಂಪ್ಡ ಮುನಿಯಾ, ಎಷಿಯನ್ ಫೇರಿ ಬರ್ಡ, ಟಿಕಲ್ಸ ಪ್ಲೆöÊಕ್ಯಾಚರ್, ಪೆರಡೈಸ್ ಪ್ಲೆöÊ ಕ್ಯಾಚರ್, ಬ್ಲೂ ನೇಪ್ಡ ಫ್ಲೆöÊಕ್ಯಾಚರ್ ಸಂಗಡ ಸಹ ಕಂಡಿದೆ. ಹಂಪಿ ಪ್ರದೇಶದ ಕುರುಚಲು ಕಾಡಿನಲ್ಲೂ ಕಂಡ ಉದಾಹರಣೆ ಇವೆ. ಕುರುಚಲು ಗಿಡಗಳ ಸಂದಿಯಲ್ಲಿ ಅಡಗಿ ಕುಳಿತ ಇವುಗಳನ್ನು ವಿಶಿಷ್ಟವಾಗಿ ಹೊರಡಿಸುವ ಗಿಲಕಿ ಗೆಜ್ಜೆ ಸಪ್ಪಳದಂತಹ ಕೂಗಿನಿಂದ ಗುರುತಿಸಬಹುದು. ಸ್ಥಳಿಯವಾಗಿ ವಲೆಸೆ ಹೋಗುತ್ತವೆ. ಮನೆಯ ಹತ್ತಿರ, ತೋಟ ಪಟ್ಟಿ , ಕೆಸರು ಗದ್ದೆಯ ಪಕ್ಕದ ಚಿಕ್ಕ ಕೈದೋಟಗಳ ಹತ್ತಿರ ಕಾಣುವವು. ಮನೆಯ ಸಮೀಪವೇ ೪-೫ ಪೂಟು ಎತ್ತರದ ಕುರುಚಲು ಗಿಡಗಳ ಸಂದಿಯಲ್ಲಿ ಬಟ್ಟಲಾಕಾರದ ಗೂಡು ಕಟ್ಟುವವು. ಕೆಂಪು ಕುತ್ತಿಗೆ ಪಿಕಳಾರ ,ಬಿಳಿ ಕಣ್ಣಿನ ಚಿಟಗುಬ್ಬಿ, ಕೇಸರಿ ಕುತ್ತಿಗೆ ಪಿಕಳಾರ ಇವುಗಳ ಗುಂಪಿನಲ್ಲಿ ಹರಿವ ನೀರಿನಲ್ಲಿ ಸ್ಣಾನ ಮಾಡುವವು.
       ಇದರ ಮೈ ಹಳದಿ ಮಿಶ್ರಿತ ತಿಳಿಹಸಿರು ಬಣ್ಣ ಇದೆ. ಸುಮಾರು ಕೆಂಪು ಕುತ್ತಿಗೆ ಪಿಕಳಾರದಷ್ಟು ದೊಡ್ಡದು. ಇದು ನಮ್ಮ ಪ್ರದೇಶದ ಹಕ್ಕಿ ೨೦ ಸೆಂ.ಮೀ ಚಿಕ್ಕದು. ತಲೆಯಲ್ಲಿ ಕಪ್ಪು ಪುಕ್ಕದ ಚೊಟ್ಟೆಯಂತೆ ಬ್ರಮೆ ಹುಟ್ಟಿಸುವ ಕೂದಲುಗಳಿವೆ. ಸ್ನಾನ ಮಾಡಿ ತನ್ನ ಪುಕ್ಕಗಳನ್ನು ಕೆದರಿ ಒಣಗಿಸದುತ್ತಿರುವಾಗ ಇದು ಕಾಣುವುದು. ಇದು ಸಾಮಾನ್ಯವಾಗಿ ಮೌನಿ. ಆದರೂ ಗುಂಪಿನಲ್ಲಿರುವಾಗ, ಸ್ನಾನ ಮಾಡುವಾಗ ನಿರಂತರವಾಗಿ ಸಂಭಾಶಿಸುವುದು, ಇದರ ದನಿಯ ಕುರಿತು ಹೆಚ್ಚಿನ ಅಧ್ಯಯನ ಅವಶ್ಯ. ಆದರೂ ಕಷ್ಟ ಸಾಧ್ಯ. ಹೊಟ್ಟೆ ಎದೆ ತಿಳಿ ಹಳದಿ ತಲೆ ತಿಳಿ ಪಾಚಿ ಹಸಿರು. ಹಳದಿ ಕಣ್ಣು ಹುಬ್ಬು ಸ್ಪಷ್ಟವಾಗಿ ಕಾಣುವುದು. ಅದಕ್ಕಾಗಿಯೇ ಇದನ್ನು ಹಳದಿ ಹುಬ್ಬಿನ ಪಿಕಳಾರ ಎಂದು ಹೆಸರಿಸಲಾಗಿದೆ. ಇತರ ಪಿಕಳಾರಗಳಂತೆ ಇದು ಗಲಾಟೆ ಮಾಡುವುದಿಲ್ಲ. ಟೂಟೀ, ಟೂಟೀ ಎಂದು ಸಿಳ್ಳಿನಂತೆ ಕೂಗುವುದು. ಬೆಳಿಗ್ಗೆ, ಮಧ್ಯಾಹ್ನ ಕೆಲವೊಮ್ಮೆ ೪ ಗಂಟೆಯ ನಂತರ, ಅಪರೂಪವಾಗಿ ೭ ಗಂಟೆ ಸಮಯದಲ್ಲೂ ಎತ್ತರದ ಚಿಕ್ಕ ಕಟೆಯ ಮೇಲಿಂದ ಹರಿವ ನೀರಿಗೆ ದುಮುಕಿ, ಅಲ್ಲಿ ಕುಳಿತುಕೊಂಡು ರೆಕ್ಕೆ ಬಡಿದು ನೀರು ಚಿಮ್ಮಿಸುತ್ತಾ ಸ್ನಾನ ಮಾಡುವವು. ಹೀಗೆ ನಾಲ್ಕಾರರ ಗುಂಪಿನಲ್ಲಿ ಇವುಗಳ ಸ್ನಾನ ವೈಖರಿ ತುಂಬಾ ಸುಂದರ,ೆ ಕೆಲವು ವೀಡಿಯೋಗಳನ್ನು ದಾಖಲಿಸಿದ್ದೇನೆ. ಹೆಚ್ಚಿನ ಅಧ್ಯಯನ ನಡೆಸುತ್ತಿದ್ದೇನೆ. ಹಣ್ಣು, ಕೀಟ ಹೂವಿನ ಮಕರಂದ ಇದಕ್ಕೆ ಪ್ರಿಯ. ಹಾಗಾಗಿ ಹೂವಿನ ಪರಾಗಸ್ಪರ್ಶ ಹಾಗೂ ಕೀಟ ನಿಯಂತ್ರಣದಲ್ಲಿ ಇದರ ಪಾತ್ರ ಹಿರಿದು.ಮುಂಬೈ, ಪಳಿನಿ, ನೀಲಗಿರಿ, ಕೇರಳ ಪ್ರದೇಶದಲ್ಲೂ ಇವೆ. ಇತರ ಪಿಕಳಾರಗಳ ಗೂಡಿನಂತೆ ಇದರ ಗೂಡಿಲ್ಲ. ಸುಮಾರು ೨ ರಿಂದ ೩ ಮೀ. ಎತ್ರರದಲ್ಲಿ ಮರದ ಕವರುಗಳಲ್ಲಿ ನೆಯದು ಗೂಡು ತೂಗಿ ಬಿಡುವುದು, ಇದರ ಗೂಡು ನೀಲಿ ತಲೆ ಅಯೋರಾ ಅಥವಾ ಕಪ್ಪು ತಲೆ ಅರಿಸಿನ ಬುರುಡೆ ಎಂದು ಕರೆಯುವ ಹಕ್ಕಿ ಗೂಡನ್ನು ಹೋಲುತ್ತದೆ. ಟೊಂಗೆಳಿಗೆ ಪಟ್ಟಿಯಂತೆ ಬಿಗಿದು ಬಟ್ಟಲಿನಾಕಾರದ ಗೂಡನ್ನು ತೂಗಿ ಬಿಡುತ್ತದೆ. ಅದರಲ್ಲಿ ಮೆತ್ತನೆ ಹಾಸನ್ನು ಮಾಡಿ ಮೊಟ್ಟೆ ಇಡುವುದು. ಪರಿಸರಕ್ಕೆ ಹೊಂದುವAತೆ ಬಿಂಜಲು ಅಥವಾ ಜೇಡದ ಬಲೆಯನ್ನು ಹಚ್ಚುವುದು. ಗಂಡು, ಹೆಣ್ಣು ಒಂದೇರೀತಿ ಇರುವುದು. ಫೆಬ್ರವರಿಯಿಂದ ಮೇ ಮರಿಮಾಡುವ ಸಮಯ. ೨-೩ ತಿಳಿ ಕ್ರೀಮಿ ಪಿಂಕ್ ಅಂದರೆ ತಿಳಿ ಗುಲಾಬಿ ಮಿಶ್ರಿತ ಹಳದಿ ಬಣ್ಣದ ಮೊಟ್ಟೆ ಇಡುವುದು. ಗಂಡು ಹೆಣ್ಣು ಎರಡೂ ಮರಿಗಳ ಆರೈಕೆ, ರಕ್ಷಣೆ ಗುಟುಕು ನೀಡುವುದು ಇತ್ಯದಿ ಕೆಲಸ ನಿರ್ವಹಿಸುವವು. ೧೦೦೦ ದಿಂದ ೧೫೦೦ ಮೀ ಎತ್ತರದ ಹಸಿರು ತುಂಬಿತ ಜೀವ ವೈವಿದ್ಯ ತಾಣಗಳು ಇವುಗಳ ವಾಸಸ್ಥಳ. ೫ರಿಂದ ೭ ಅಥವಾ ಕೆಲವೊಮ್ಮೆ ೫೦ ಹೆಚು ದೊಡ್ಡ ಗುಂಪಿನಲ್ಲೂ ಕಂಡ ಉದಾಹರಣೆ ಇದೆ. ಇದು ಪಶ್ಚಿಮ ಘಟ್ಟದ ಅಪರೂಪದ ಸುಂದರ ಹಕ್ಕಿ .ಇದರ ಕುರಿತು ಇದರ ಕೂಗಿನ ಕುರಿತು, ಇವು ಮರಿಗಳಿಗೆ ಶೈಶವಾವಸ್ಥೆಯಲ್ಲಿ ಯಾವ ವಿಭಿನ್ನ ಆಹಾರ ನೀಡುತ್ತವೆ. ಇವು ಕಳಿತ ಹಣ್ಣು, ಮೃದ್ವಂಗಿ, ಪರಾಗ, ಕ್ರಿಮಿ ಹೀಗೆ ಮಿಶ್ರಾಹಾರಿ ಹಕ್ಕಿ ಹಾಗಾಗಿ ಇತರ ಜೀವಜಂತುಗಳ ಕುರಿತು ಇವುಗಳಿಗಿರುವ ಪ್ರತಿರೋಧ ಶಕ್ತಿ. ಈಕುರಿತು ಅಧ್ಯಯನ ಮಾಡುವುದು ಅವಶ್ಯ.

No comments:

Post a Comment