Monday, February 24, 2014

Indian Robin-saxicoloides falicata

Indian Robin-saxicoloides falicata
ಗಂಡು ನೀಲಿ ಬಣ್ಣ ಹೊಂದಿದೆ , ರೆಕ್ಕೆಯಬುಡದಲ್ಲಿ  ಬಿಳಿ ಮಚ್ಚೆ ಇದೆ. ಹೆಣ್ಣಿಗೆಕ್ನ್ಗೆಂಪು  ಬಣ್ಣ ಇದೆ. ರೆಕ್ಕೆಯಲ್ಲಿ ಮಚ್ಚೆ ಇಲ್ಲ ಬಾಲ ದಬುಡದಲ್ಲಿ ಕೆಳಗಡೆ ಕೆಂಗೆಮ್ಪು  ಬಣ್ಣ ಇದೆ. ರಾಬಿನ್ ಹಕ್ಕಿ ಹಳ್ಳಿ   ಪೇಟೆಗಳ ಸು ಪಾಸು ನೆಲೆಸುವುದು. ಸುಮಾರು ೧೬ ಸೆಮ್. ಮಿ. ದೊಡ್ಡ ಇರುವುದು. ಕಪ್ಪು ಬಣ್ಣದ ಗಂಡು ಹಕ್ಕಿ ಹೆಣ್ಣು ಹಕ್ಕಿಯ ಜೊತೆ ಕೀಟ , ಜೇಡರ ಹುಳು , ಇರುವೆ, ಗೆದ್ದಲು ಹುಳು ಇತ್ಯಾದಿ ಗಳನ್ನೂ  ಹಿಡಿದು ತಿನ್ನುವುದು. ನೆಲದ ಮೇಲೆ  ಕುಪ್ಪಳಿಸುತ್ತಾ ಬಾಲವನ್ನು ಮೇಲಕ್ಕೆ ಎತ್ತುತ್ತಾ ಹುಳಗಳನ್ನು ತಿನ್ನುತ್ತಾ  ಇರುವುದು. ಹಗೆ ಬಾಲ ಮೇಲೆತ್ತಿದಾಗ ಪುಕ್ಕದ ಬುಡದಲ್ಲಿರುವ ಕೆಂಪು ಬಣ್ಣ ಸ್ಪಷ್ಟವಾಗಿ ಕಾಣು ವುದು. ಕುಪ್ಪಲಿಸುವಾಗ ಪ್ರತಿಸಲ ಬಾಲ ಎತ್ತುವುದು ಇದರ ಸ್ವಭಾವ. ಗೆದ್ದಲು ಹುಳು ಇದರ ಮುಖ್ಯ ಆಹಾರ . ಹಾಗಾಗಿ ಕುಪ್ಪೆ, ತಿಪ್ಪೆ, ಕಸ ಹಾಕುವ ಜಾಗ ದಲ್ಲಿ ಹೆಚ್ಚಾಗಿ ಕಾಣುವುದು.
ಇಲ್ಲಿರುವ್ ಫೋಟೋ ಮೈಸೂರಿನಲ್ಲಿ ನಾದಿನಿಯ ಮನೆಯ ಗ್ರಹಪ್ರವೇಶಕ್ಕೆ ಹೋದಾಗ ತೆಗೆದದ್ದು. ಮನೆಕಟ್ಟಲು ತಂದ ಉಳಿದ ಇಟ್ಟಿಗೆಯ ತೂತಿನಲ್ಲಿ ಗೂಡು ಕಟ್ಟುತ್ತಿ ತ್ತು ಗ಼ುದು ಸುಮಾರು ಎರಡು  ಎತ್ತರದಲ್ಲಿ ಇತ್ತು. ತನ್ನ ವೈರಿಗೆ ಬ್ರಮೆ ಹುಟ್ಟಿಸಲು ಪಕ್ಕದ ತುತಿನಲ್ಲೂ ಸ್ವಲ್ಪ ಗೂಡು ಕಟ್ಟುವ ಪರಿಕರ ತುರುಕಿತ್ತು. ಗಂಡು ಹೆಣ್ಣು  ಸೇರಿ ಗೂಡುಕಟ್ಟು ತ್ತಿತ್ತು.ಹು ಲ್ಲಿನ ಕಡ್ಡಿ , ಕಾಂಗ್ರೆಸ ಗಿಡದ ಒಣಗಿದ ಎಲೆ ಜೇಡರ ಬಲೆಯ ತುಂಡು ಇತ್ಯಾದಿ ಸರಕುಗಳನ್ನು ಸರತಿ ಸಾಲಿನಲ್ಲಿ ತರುತ್ತಿತ್ತು.  ಚಟುವಟಿಕೆಯಲ್ಲಿ ಹೆಣ್ಣು ಬಹಳ ಚುರುಕಾಗಿ ಕೆಲಸಮಾಡು ತ್ತಿತ್ತು. ೧೨-೩೦ ರಿಂದ ೧ ಗಂಟೆಯ ವರೆಗೆ  ಚಟುವಟಿಕೆ ಸತತವಾಗಿ ಸಾಗಿತ್ತು.  ಬಣ್ಣ ಆಕಾರ ವ್ಯತ್ಯಾಸದಿಂದ ೨ ಪ್ರಭೇದಗಳು ಭಾರತದಲ್ಲಿ ಇದೆ. ಉತ್ತರ  ಭಾರತದಲ್ಲಿ ಇರುವ ಹಕ್ಕಿಯ ಬಣ್ಣ ಬೂ ದು  ಕೆಂಪು. ದಕ್ಷಿಣ ಭಾರತದ ಹಕ್ಕಿಯ ಬಣ್ಣ ಕೆಂಗೆಮ್ಪು .ಸ್ಪಸ್ಟ ವಾಗಿ ಕಾಣುವುದು. ಹುಲ್ಲು ಕಡ್ಡಿ ಗಳಿಂದ ಕಟ್ಟಿ  ಗೂಡಿನ ಒಳಗೆ ಕೆಲವೊಮ್ಮೆ ಬಿಟ್ಟ ಹಾವಿನ ಪೊರೆ, ಹಕ್ಕಿಯ ಮ್ರದುವಾದ ಗರಿ ಹಾಕುವುದು.
ಧಾರವಾಡ , ಹಾವೇರಿ, ಮೈಸೂರು, ಕರಾವಳಿ ಪ್ರದೇಶಗಳ ಕುರುಚಲು ಕಾಡುಗಳಲ್ಲಿ ಕಾಣು ವುದು. ಪೊದೆಗಳಲ್ಲಿ, ಸೇತುವೆಯ ಸಂದಿಗಳಲ್ಲಿ ಸಂಸಾರ ಹೊಡಿ , ಮೊಟ್ಟೆ ಇಟ್ಟು  ಮರಿ ಮಾದುವುದು.
ಬಾಂಗ್ಲ ದೇಶ , ಶ್ರಿ ಲಂಕಾ , ಪಾಕಿಸ್ತಾನಗಳಲ್ಲೂ ಇದೆ. ಶ್ರಿ ಲಂಕಾ ಹಕ್ಕಿಗೆ ಕಪ್ಪು ಬೆನ್ನು ಇದೆ. ಉತ್ತರದ ಹಕ್ಕಿಗೆ ಕೆಂಗೆನ್ಪುಬೆನ್ನಿನ  ಬಣ್ಣ ಇದೆ.  ಹೆಣ್ಣು ಮರಿಯ ಪಾಲನೆ ಪೋಷಣೆ ಮಾದುವುದು. ಗಂಡು ರಕ್ಷಣೆ , ಆಹಾರಾ ಸರಬರಾಜು ಮಾದುವುದು.

Male- ಗಂಡು 

hennu-female -ಹೆಣ್ಣು 
ಗೂಡು -ನೆಸ್ಟ್