Sunday, June 9, 2013

Coppersmit barbet


COPPERSMITH BARBET-Megalaima haemacephala
ಕೊಪ್ಪರಸ್ಮಿತ್  ಬಾರ್ಬೆಟ್ - ಚಿಟ್ಟ  ಗುಟುರ್ -






       ೧ ೭ ಸೆಂ.ಮೀ. ಉದ್ದದ ಗುಬ್ಬಿ ಗಾತ್ರದ ದುಂಡಗಿನ ಹಕ್ಕಿ. ಹಸಿರುಹುಲ್ಲು ಬಣ್ಣ. ಮುಂದೆಲೆ, ಎದೆಯಮೇಲೆ ಕುಂಕುಮ ಬಣ್ಣದ ಪಟ್ಟೆ ಇದೆ. ಎದೆ, ಕುತ್ತಿಗೆ ಕೆಳಗೆ, ಕಣ್ಣಿನ ಮೇಲೆ ಕೆಳಗೆ ಹಳದಿ ಬಣ್ಣ .ಹಳದಿಬಣ್ಣದ ಎದೆಯಮೇಲೆ ಹಸಿರುಮಿಶ್ರಿತ ಕಪ್ಪು ಬಣ್ಣದ ಗೀರುಗಳಿವೆ. ಬಲವಾದ ಚಕ್ಕ ಚುಂಚು.ಕೊಕ್ಕಿನ ಬುಡದಲ್ಲಿ ಉದ್ದ ಹಾಗೂ ದಬ್ಬ ಮೀಸೆ ಕೂದಲು ಇದೆ.ಕುಂಕುಮ ಬಣ್ಣದ ಚಿಕ್ಕ ಕಾಲು. ದಪ್ಪ ಗಿಡ್ಡ ಚೊಟುದ್ದದ ಬಾಲ ಹಾರುವಾಗ ತ್ರಿಕೋನಾಕಾರದಲ್ಲಿ ಕಾಣುವುದು.ನಾಲ್ಕಾರು ಹಕ್ಕಿಗಳು ಗುಂಪಾಗಿ,ಆಲ ಬಸುರಿ, ಗೋಣಿ, ಹಣ್ಣಾದಾಗ ಕಾಣುವುದು. ಗಂಡು ಹೆಣ್ಣು ಒಂದೇರೀತಿ ಇರುವುದು. ಮೊದಲು ನನಗೆ ಕಾಣಿಸಿದ್ದು ಮುಂಜಾನೆ ರಸ್ತೆ ಪಕ್ಕದ ಮಾವಿನ ಮರದ ತುದಿಯಲ್ಲಿ ಜೋಡಿಹಕ್ಕಿ.ಅನಂತರ ಒಂದು  ವರುಷದ ನಂತರ ಮೂರೂರಿನ ತೊಂಡೆಕೆರೆ ಹತ್ತಿರ ಆಲದಮರದಲ್ಲಿ ಹಣ್ಣಾದಾಗ. ಇದರ ಕೂಗು ತಾಮ್ರದ ಮೇಲೆ ಸುತ್ತಿಗೆಯಿಂದ ಬಡಿದಾಗ ಬರುವ ಸದ್ದಿನಂತಿದೆ ಹಾಗಾಗಿ ಇದಕ್ಕೆ ಇಂಗ್ಲೀಷ ನಲ್ಲಿ 'ಕೊಪ್ಪರ್ಸ್ಮಿತ್ ಬಾರ್ಬೆಟ್ ' ಎಂದು ಇದರ ಕೂಗನ್ನು ಆದರಿಸಿ ಹೆಸರು ನೀಡಿದೆ. ಟೊಯಕ್ ಟೊಯಕ್ ಎಂದು ದಿನವಿಡೀ ಒಂದೇಸವನೆ ಕೂಗುವುದು.
ಜನವರಿಯಿಂದ-ಜೂನ್ ಅವಧಿಯಲ್ಲಿ ಒಣಗಿದ  ಅಥವಾ ಹಸಿಯಾದ ಆಲ, ಬಸುರಿ, ನುಗ್ಗೆ, ಗೊರುಕಲು, ಮಾವು ಮುಂತಾದ ಭೂಮಿಗೆ ಸಮಾನಾಂತರವಾಗಿರುವ ಟೊಂಗೆಗಳಲ್ಲಿ ಸಾಧಾರಣ ಎತ್ತರದಲ್ಲಿ ಒಟ್ಟೆ ಕೊರೆದು ಅಲ್ಲಿ ಗೂಡು ಮಾಡಿಕೊಳ್ಳುವುದು.
ಟೊಂಗೆಯ ಅಡಿಬದಿಗೆ  ಒಟ್ಟೆ ಇರುವದು.

  ಭಾರತ, ಬಾಂಗ್ಲಾದೇಶ. ಪಾಕಿಸ್ಥಾನ, ಬರಮಾ ಆಗ್ನೇಯ ಏಷಿಯಾದ ಎಲ್ಲಾ ದೇಷಗಳಲ್ಲಿ ಇದೆ. ಇದು ಹೆಚ್ಚಾಗಿ ನೆಲಕ್ಕೆ ಇಳಿಯುವುದೇ ಇಲ್ಲ. ಹಾರುವ ರೆಕ್ಕೆ ಕೀಟಗಳು, ನುಸಿ , ಇದರ ಪ್ರಿಯಾಹಾರ. ಮಾವಿನ ಮರದ ಹತ್ತಿರ ಇಂತಹ ನುಸಿ ಹೆಚ್ಚಾಗಿರುವುದರಿಂದ  ಇದು ಅಲ್ಲಿ ಬೀಡುಬಿಡುವುದು. ಈ ಕೀಟಗಳನ್ನು ತಿಂದು ಮಾವು ಬೆಳೆಗೆ ಬರುವ ಎಷ್ಟೋ ರೋಗಗಳನ್ನು ತಡೆಯುವುದು. ಹಾಗಾಗಿ ಮಾವು ಬೆಳೆಗಾರರ ಮಿತ್ರ ಈ ಹಕ್ಕಿ.

1 comment:

  1. Ondu Hakkiya bagge nivu nidiruva mahiti ati upayuktavaadudu. Hige saagali nimma ee payana saralavaagi sahajavaagi belakige barali nimma pratibhe. Nimma Mahitige nanna Dhanyavaadagalu.

    ReplyDelete